ಇತ್ತೀಚಿನ ದಿನಗಳಲ್ಲಿ ಲವ್ ಎನ್ನೋದು ಡೇಟ್ ಮುಗಿದ ಬಳಿಕ ಬದಲಿಸೋ ಕ್ಯಾಲೆಂಡರ್ ರೀತಿ ಆಗಿದೆ. ತುಂಬಾ ನಿಷ್ಟೆಯಿಂದ ಪ್ರೀತಿ ಮಾಡಿ ಮದುವೆ ಆಗುವವರ ಸಂಖ್ಯೆ ತುಂಬಾ ಕಡಿಮೆ. ಆದರೆ ಕೆಲವೊಬ್ಬರು ಕಾಲನುಘಟ್ಟಲೇ ಪ್ರೀತಿ ಮಾಡಿ ನಮ್ಮ ಮನೆಯಲ್ಲಿ ಒಪ್ಪುತ್ತಿಲ್ಲ, ನೀನು ಬೇರೆ ಹುಡುಗಿಯನ್ನು ಮದುವೆಯಾಗಿ ಚೆನ್ನಾಗಿರು ಅಂತ ಕಾಮನ್ ಡೈಲಾಗ್ ಹೊಡೆದು ಹೋಗುತ್ತಾರೆ. ಇಂತಹ ಹುಡುಗಿಯರ ಮಧ್ಯೆ ಇಲ್ಲೊಂದು ಹುಡುಗಿ ತನ್ನ ಲವರ್ ಗಾಗಿ ಎಂಥಾ ತ್ಯಾಗ ಮಾಡಿದ್ದಾಳೆ ಗೊತ್ತಾ. ಹಾಗಿದ್ರೆ ಈ ಸ್ಟೋರಿ ಪೂರ್ತಿ ಓದಿ.
ಹೌದು, ಲವರ್ಗಾಗಿ 2000 ಕೋಟಿ ಆಸ್ತಿ ತ್ಯಜಿಸಿದ ಮಹಿಳೆ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಾಳೆ. ಕಾಲೇಜಿನಲ್ಲಿ ಓದುತ್ತಿರುವಾಗ ತಂದೆ-ತಾಯಿ ತನ್ನ ಪ್ರೀತಿಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ 2500 ಕೋಟಿ ರೂಪಾಯಿ ಆಸ್ತಿಯನ್ನು ನಿರಾಕರಿಸಿದ ಆಧುನಿಕ ಪ್ರೇಮಕಥೆ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಪ್ರೀತಿಯ ದೇವತೆಯ ಹೆಸರು ಏಂಜಲಿನ್ ಫ್ರಾನ್ಸಿಸ್.
ಎಲ್ಲ ಪ್ರೇಮಿಗಳು ಮದುವೆಯಾಗಲು ತ್ಯಾಗ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಯಾರಲ್ಲೂ ಸರಿಯಾದ ಉತ್ತರ ಇಲ್ಲ. ಆದರೆ, ಕೆಲವರು ಪ್ರೀತಿಯನ್ನು ಮದುವೆಯ ಸಂಬಂಧವಾಗಿ ಪರಿವರ್ತಿಸಲು ಕೆಲವು ತ್ಯಾಗ ಮಾಡುತ್ತಾರೆ. ಜೀವನದ ಬಹುಭಾಗವನ್ನು ಕಳೆದುಕೊಂಡು ಪ್ರೀತಿಗೆ ಬೆಲೆ ಕೊಡುತ್ತಾರೆ.
ಈ ಏಂಜೆಲಿನ್ ಫ್ರಾನ್ಸಿಸ್ ಉದ್ಯಮಿ ಕೂ ಕೇ ಪೆಂಗ್ ಮತ್ತು ಮಾಜಿ ಮಿಸ್ ಮಲೇಷ್ಯಾ ಪಾಲಿನ್ ತ್ಸೈ ಅವರ ಪುತ್ರಿ. ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ, ಅವರು ಜೆಡಿಯಾ ಫ್ರಾನ್ಸಿಸ್ ಅವರನ್ನು ಭೇಟಿಯಾದರು. ಸ್ನೇಹ ಪ್ರೀತಿಯಾಗಿತ್ತು, ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.
ನಿಜವಾದ ಪ್ರೀತಿ ಎಂದರೆ ನೀವು ಪ್ರೀತಿಸುವವರೊಂದಿಗೆ ಇರಲು ಏನನ್ನಾದರೂ ತ್ಯಾಗ ಮಾಡುವುದು ಎಂಬ ಮಾತಿದೆ. ಅದಕ್ಕಂತೆ ತಕ್ಕಂತೆ ಏಂಜೆಲಿನ್ ಫ್ರಾನ್ಸಿಸ್ ತನ್ನ ಶ್ರೀಮಂತಿಕೆಯನ್ನು ತೊರೆದು ಪವಿತ್ರ ಪ್ರೀತಿಗೆ ಬೆಲೆಕೊಟ್ಟು ಪ್ರೀತಿಸಿದ ಯುವಕನ ಹಿಂದೆ ಹೋಗಿದ್ದಾಳೆ.
ಏಂಜಲೀನ್ ಅವರ ತಂದೆ ಕೋರಸ್ ಹೋಟೆಲ್ಗಳ ನಿರ್ದೇಶಕರು. ಮಲೇಷಿಯಾದ 44ನೇ ಶ್ರೀಮಂತ ವ್ಯಕ್ತಿ. ಒಬ್ಬ ಸಾಮಾನ್ಯನನ್ನು ಅಳಿಯನನ್ನಾಗಿ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಏಂಜಲೀನ್ ಅವರ ಕುಟುಂಬವು ಪ್ರೀತಿಯನ್ನು ಒಪ್ಪಿರಲಿಲ್ಲ. ಅಂತಿಮವಾಗಿ ಕುಟುಂಬ ಅಥವಾ ಪ್ರೀತಿಯ ಪ್ರಶ್ನೆ ಬಂದಾಗ, ಏಂಜಲೀನ್ ಪ್ರೀತಿಯನ್ನ ಆಯ್ಕೆ ಮಾಡಿಕೊಂಡಳು.
ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಇಂಥಹ ಕಾಲದಲ್ಲೂ ಈ ಥರ ಹುಡುಗಿ ಇರುತ್ತಾರ,, ವಾವ್ ಗ್ರೇಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.