ಅಸ್ಸೋಂ : ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವ ಆನೆಗಳು ಹಿಂಡು ಹಿಂಡಾಗಿ ಬರುತ್ತವೆ. ಈ ಹಿಂಡಿನಲ್ಲಿ 5 ರಿಂದ 10 ಇಲ್ಲ, ಹೆಚ್ಚೆಂದರೆ 20 ಆನೆಗಳು ಇರುವುದನ್ನು ನೋಡಿದ್ದೇವೆ. ಆದರೆ, ಅಸ್ಸೋಂನ ನಾಗಾನ್ ಜಿಲ್ಲೆಯ ಸಗುನ್ ಬಹಿ ಗ್ರಾಮಕ್ಕೆ ಬರೋಬ್ಬರಿ 200 ಆನೆಗಳು ನುಗ್ಗಿವೆ. ಆನೆಗಳ ದೊಡ್ಡ ಹಿಂಡನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ನೆರವಿನಿಂದ ಆನೆಗಳ ಹಿಂಡನ್ನು ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆನೆಗಳು ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಬಂದಿವೆ ಎಂದು ನಾಗಾನ್ ಅರಣ್ಯ ಸಂರಕ್ಷಣಾಧಿಕಾರಿ ರಾಜೇನ್ ಸೈಕಿಯಾ ಹೇಳಿದ್ದಾರೆ.