ಇತ್ತೀಚಿಗೆ ಯುವತಿಯರು ಹಣ್ಣು ಹಣ್ಣು ಮುದುಕರನ್ನು ಮದುವೆಯಾಗುವ ಟ್ರೆಂಡ್ ಒಂದು ಹುಟ್ಟಿಕೊಂಡಿದೆ. ವಯಸ್ಸಿನಲ್ಲಿ ಹೆಚ್ಚು ಅಂತರವಿರುವವರು ವಿವಾಹವಾಗುತ್ತಿರುವುದು ಸಾಮಾನ್ಯವಾಗಿದೆ ಹೌದು ಈ ಹಿಂದೆಯೂ ಚೆಂದುಳ್ಳಿ ಚೆಲುವೆಯರು ತಮ್ಮ ತಾತನ ವಯಸ್ಸಿನ ವ್ಯಕ್ತಿಗಳನ್ನು ಮದುವೆಯಾಗುವ ಸುದ್ದಿಗಳು ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, 20 ರ ತರುಣಿಯೊಬ್ಬರು 70 ವರ್ಷದ ಹಣ್ಣು ಮುದುಕನನ್ನು ಮದುವೆಯಾಗಿದ್ದಾಳೆ.
https://x.com/Gulzar_sahab/status/1839187371452960914
ವಯಸ್ಸಿನಲ್ಲಿ ಹೆಚ್ಚು ಅಂತರವಿರುವವರು ವಿವಾಹವಾಗುತ್ತಿರುವುದು ಸಾಮಾನ್ಯವಾಗಿದೆ. ಆದರೆ ವರ ಅಜ್ಜನಾಗಿ ವಧು ಹುಡುಗಿಯಾಗಿದ್ದರೆ ಮದುವೆ ನೋಡಲು ಹೇಗಿರುತ್ತದೆ ಅನ್ನೋದನ್ನು ಕಲ್ಪಿಸಿಕೊಳ್ಳಿ.
ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, 20 ರ ತರುಣಿಯೊಬ್ಬರು 70 ವರ್ಷದ ಹಣ್ಣು ಮುದುಕನನ್ನು ಮದುವೆಯಾಗಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ದೃಶ್ಯ ನೋಡಿ ನಾವುಗಳು ಮಠ ಸೇರೋದೇ ಬೆಸ್ಟು ಎಂದಿದ್ದಾರೆ ಯುವಕರು.
ಸೆಪ್ಟೆಂಬರ್ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದನ್ನೆಲ್ಲಾ ನೋಡಿ ಸಿಂಗಲ್ ಆಗಿರುವ ನನ್ನ ದುಃಖ ಇನ್ನೂ ಜಾಸ್ತಿಯಾಗ್ತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.