ಆನೇಕಲ್ : ಲಾಂಗ್ ನಿಂದ ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಅತ್ತಿಬೆಲೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ರೂಪೇನ ಅಗ್ರಹಾರ ಮೂಲದ ಅಜಯ್, ಕಂಸಂದ್ರ ಮೂಲದ ಯಮನೂರು ನಾಯಕ್ ಗಾರೆಪಾಳ್ಯ ಮೂಲದ ನವೀನ್ ಜೋಬಿನ್ ಹಾಗೂ ಗೌತಮ್ ಬಂದಿತ ಆರೋಪಿಗಳು, ಹೌದು ಅಕ್ಟೋಬರ್ 22ನೇ ತಾರೀಕಿನಂದು ಹೆಬ್ಬಗೋಡಿ ಬಳಿ ತಾತ್ಕಾಲಿಕವಾಗಿ ಪಟಾಕಿ ಅಂಗಡಿ ಚಂದ್ರಶೇಖರ್ ತೆರೆದಿದ್ರು ವ್ಯಾಪಾರ ಮುಗಿಸಿ ಮನೆಗೆ ಬರಲು ಬೆಂಗಳೂರು ಹೊಸೂರು ಮುಖ್ಯ ರಸ್ತೆ ಅತ್ತಿಬೆಲೆ ಬಂದಾಗ ಇಬ್ಬರೂ ಬೈಕ್ ನಲ್ಲಿ ಬಂದಿದ್ದ ಯುವಕರು ಚಂದ್ರಶೇಖರ್ ಕಾರನ್ನ ತಡೆದು ಗ್ಲಾಸ್ ಒಡೆದು ಲಾಂಗಿನಿಂದ,
ಬೆದರಿಸಿ 20 ಲಕ್ಷ ಹಣವನ್ನು ಕದ್ದು ಪರಾರಿಯಾಗಿದ್ದರು ಹಣ ಕಳೆದುಕೊಂಡ ಚಂದ್ರಶೇಖರ್ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು . ಆರೋಪಿಗಳ ಪತ್ತೆಗಾಗಿ ಬಲೆ ಬಿಸಾಲಸಗಿತ್ತು, ಸದ್ಯ ಅತ್ತಿಬೆಲೆ ಪೊಲೀಸ್ರು ಆರೋಪಿಗಳನ್ನು ಎಡೆ ಮುಡಿಕಟ್ಟವಲ್ಲಿ ಯಶಸ್ವಿಯಾಗಿದ್ದಾರೆ ಇನ್ನು ಬಂದಿತ ಆರೋಪಿಗಳಿಂದ 7 ಲಕ್ಷ 16 ಸಾವಿರ ನಗದು, ಒಂದು ಲಾಂಗ್ ಎರಡು ದ್ವಿಚಕ್ರ ವಾಹನ 5 ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

