ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ 2 ಪಕ್ಷದಿಂದ ನನ್ನ ವಿರುದ್ಧ ದೊಡ್ಡ ಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಬೆಂಗಳೂರಿನ ಸದಾಶಿವನಗರದದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಯಾವ ವಯಸ್ಸಿನಲ್ಲಿ ಎಲ್ಲೆಲ್ಲಿ ಕುಸ್ತಿ, ಜಗಳ ಮಾಡಬೇಕೋ ಮಾಡಿದ್ದೇನೆ. ಕೂದಲು ಬೆಳ್ಳಗಾಗಿವೆ. ಅವರಿಗೆ ಶಕ್ತಿ ಇರಬಹುದು, ನಮಗೆ ಇಲ್ಲ. ಅವರ ಮಾತಿಗೆ ಜನ ಉತ್ತರ ನೀಡುತ್ತಾರೆ. ನನ್ನ ಮೇಲೆ ಏನೆಲ್ಲಾ ಪ್ರಯೋಗ ಆಗಬೇಕೋ ಅವೆಲ್ಲ ಆಗಿವೆ. ನಾನು ಕಲ್ಲು, ಬಂಡೆ ಎಲ್ಲವನ್ನು ಹೊತ್ತಿದ್ದೇನೆ. ನನಗೆ ಎಲ್ಲವೂ ಗೊತ್ತಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
