ಬೆಂಗಳೂರು: ದುಬೈನಿಂದ ಆಗಮಿಸಿದ ವಿಮಾನದಲ್ಲಿ ಕಳ್ಳಸಾಗಾಣಿಕೆಯಾಗುತ್ತಿದ್ದ ಸುಮಾರು 1.37 ಕೋಟಿ ರೂಪಾಯಿ ಮೌಲ್ಯದ 2.8 ಕೆಜಿ ಚಿನ್ನದ ಬಿಸ್ಕತ್ ಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಅಬಕಾರಿ ತೆರಿಗೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ 6ಇ096 ವಿಮಾನ ತಪಾಸಣೆಗೊಳಪಡಿಸಿದಾಗ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿತ್ತು.24 ಚಿನ್ನದ ಸ್ವರೂಪದಲ್ಲಿ 2.8 ಕೆಜಿಯಷ್ಟು ತೂಕದ ಚಿನ್ನವನ್ನು ದುಬೈನಿಂದ ಕಳ್ಳಸಾಗಾಣಿಕೆ ಮೂಲಕ ಸಾಗಿಸಲಾಗುತ್ತಿತ್ತು.

ವಿಮಾನ ನಿಲ್ದಾಣದಲ್ಲಿ ಬಿಗಿ ತಪಾಸಣೆ ಇದಿದ್ದರಿಂದ ಪ್ರಯಾಣಿಕರ ಸೀಟಿನ ಕೆಳಗೆ ಎರಡು ಕಂಬಿಗಳನ್ನು ಹೊಂದಾಣಿಕೆ ಮಾಡಿ ಬ್ಯಾಗ್ ಅನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗಿತ್ತು. ಅಧಿಕಾರಿಗಳು ಆ ಕಂಬಿಗಳನ್ನು ಕತ್ತರಿಸಿ ಬೂದು ಬಣ್ಣದ ಬ್ಯಾಗ್‍ನಲ್ಲಿ ಅಡಗಿಸಿಟ್ಟಿದ್ದ ಬ್ಯಾಗ್ ಅನ್ನು ಹೊರ ತೆಗೆದು ಚಿನ್ನ ವಶ ಪಡಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಕಳ್ಳಸಾಗಾಣಿಕೆದಾರರ ಗುಂಪು ವಿದೇಶಿ ವಿಮಾನಗಳಲ್ಲಿ ವ್ಯವಸ್ಥಿತವಾಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.
