ಹುಬ್ಬಳ್ಳಿ: 2.30 ಲಕ್ಷ ಮೌಲ್ಯದ ಚಿನ್ನಾಭರಣ ಕಳವು, ದೂರು ದಾಖಲು!

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಗದಗ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 2.30 ಲಕ್ಷ ರೂ. ಮೌಲ್ಯದ 50 ಗ್ರಾಂ ಮಾಂಗಲ್ಯ ಮತ್ತು ಬಳೆ ಕಳವಾಗಿವೆ. ಬೈರಿದೇವರಕೊಪ್ಪದ ಶಾಂತಾದೇವಿ ಎಂಬುವರ ಆಭರಣ ಕಳವಾಗಿದೆ. ಹೊಸೂರು ಬಸ್‌ ನಿಲ್ದಾಣದಲ್ಲಿ ಗದಗ ಕಡೆ ಹೋಗುವ ಬಸ್ ಹತ್ತುವ ವೇಳೆ 1.50 ಲಕ್ಷ ಮೌಲ್ಯದ ಮಾಂಗಲ್ಯ ಹಾಗೂ 20 ಗ್ರಾಂ ಬಳೆ ಬ್ಯಾಗ್‌ನಿಂದ ಕದಿಯಲಾಗಿದೆ ಎಂದು ವಿದ್ಯಾನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.