ಬೆಂಗಳೂರು: ಹೊಸವರ್ಷಕ್ಕೆ ಕಂದಾಯ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದ್ದು, ಆಸ್ತಿ ರಿಜಿಸ್ಟ್ರೇಷನ್ ಶುಲ್ಕದಲ್ಲಿ ಶೇ 10 ರಷ್ಟು ಕಡಿತ ಮಾಡಿದೆ. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್, ಆಸ್ತಿ ವಹಿವಾಟು ಸಂಬಂಧಿಸಿದಂತೆ, ಯಾರು ಖರೀದಿ ಮಾಡ್ತಾರೆ ಅಂತವರಿಗೆ ರೆವಿನ್ಯೂ, ಸೈಟ್, ಫ್ಲಾಟ್ ಗೈಡೆನ್ಸ್ ವ್ಯಾಲ್ಯು 10% ಕಡಿಮೆ ಮಾಡಲಾಗುತ್ತೆ. ಅಗ್ರಿಮೆಂಟ್ ಮಾಡಿರೋ, ರಿಜಿಸ್ಟ್ರೇಷನ್ ಮಾಡಿಸುವರಿಗೆ ಇದು ಅನ್ವಯಿಸಲಾಗಿದೆ.
ಆದರೆ ಇದು ಮೂರು ತಿಂಗಳು ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದರು. ಇನ್ನೂ ಇಂದಿನಿಂದಲೇ ರಿಯಾಯಿತಿ ನೀಡಲು ನಿರ್ಧರಿಸಲಾಗಿದ್ದು, ರಾಜ್ಯದ ಸಚಿವರ ಜೊತೆ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ. ಇನ್ನೂ ಆಯಾ ಪ್ರದೇಶದ ಗೈಡ್‌ಲೈನ್ಸ್ ವ್ಯಾಲ್ಯೂ ಪ್ರಕಾರ ಇದು ಅನ್ವಯವಾಗಲಿದ್ದು, ಎಲ್ಲಾ ರೀತಿಯ ರಿಜಿಸ್ಟ್ರೇಷನ್‌ಗೆ ಇದು ಅನ್ವಯವಾಗಲಿದೆ’ ಎಂದು ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.
