ಬೆಂಗಳೂರು : ಕೊವೀಡ್ ನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ 1 ಲಕ್ಷ, ಕೇಂದ್ರ ಸರ್ಕಾರದಿಂದ 50 ಸಾವಿರ ಸೇರಿ, 1.5 ಲಕ್ಷ ಕೊಡಲಾಗುತ್ತಿದೆ. ಬರುವ ಜನವರಿಯಲ್ಲಿ 45 ಲಕ್ಷ ರೈತರಿಗೆ ಪಹಣಿ ಹಾಗೂ ಆರ್ ಟಿಸಿ ವಿತರಣೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಇಂದು ಕೊವೀಡ್ ನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುತ್ತಿದೆ.
ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ರಾಜ್ಯ ಸರ್ಕಾರದಿಂದ 1 ಲಕ್ಷ, ಕೇಂದ್ರ ಸರ್ಕಾರದಿಂದ 50 ಸಾವಿರ ಸೇರಿ, 1.5 ಲಕ್ಷ ರೂ. ಕೊಡಲಾಗುತ್ತಿದೆ. ಮಳೆಯಿಂದ ಮನೆ ಹಾನಿಯಾದಾಗ, ಸಿಎಂ ಸಭೆ ಮಾಡಿದ್ದರು, ಸಭೆಯಲ್ಲಿ ಕೂಡಲೇ ಅಧಿಕಾರಿಗಳಿಗೆ ಪರಿಹಾರದ ಹಣ ವಿತರಿಸುವಂತೆ ಸೂಚನೆ ನೀಡಿದ್ದರು.

ಅದರಂತೆ 15 ಲಕ್ಷ 45 ಸಾವಿರ ರೈತರಿಗೆ 1100 ಕೋಟಿ ಪರಿಹಾರ ನೀಡಲಾಗಿದೆ. ಒಂದು ತಿಂಗಳಲ್ಲೇ ಅವರ ಅಕೌಂಟ್ ಗೆ ಹಣ ಜಮಾವಣೆ ಮಾಡಲಾಗಿದ್ದು, ಬರುವ ಜನವರಿಯಲ್ಲಿ 45 ಲಕ್ಷ ರೈತರಿಗೆ ಪಹಣಿ ಹಾಗೂ ಆರ್ಟಿಸಿ ವಿತರಣೆ ಮಾಡಲಾಗುತ್ತದೆ. ದುಡ್ಡು ತೆಗೆದುಕೊಳ್ಳದೇ ಉಚಿತವಾಗಿ ರೈತರ ಮನೆಗೆ ಹೋಗಿ ವಿತರಣೆ ಮಾಡ್ತೇವೆ ಎಂದು ಹೇಳಿದ್ದಾರೆ.