ಬಿಳಿ ಜೋಳಕ್ಕೆ ಭಾರಿ ಡಿಮ್ಯಾಂಡ್ ಬಂದಿದ್ದು, ಕ್ವಿಂಟಾಲ್ ಜೋಳ 6 ಸಾವಿರಕ್ಕೆ ಮಾರಾಟವಾಗುತ್ತಿದೆ. ಬಿಳಿ ಜೋಳಕ್ಕೆ ಹೆಸರಾದ ವಿಜಯಪುರ, ಮುದ್ದೇಬಿಹಾಳ ತಾಲೂಕಿನ ನಾಲತವಾಡ ಭಾಗದಲ್ಲಿ ಬಿಳಿ ಜೋಳದ ಕೊರತೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿ ಜೋಳದ ದರ ಕೆಜಿಗೆ 65 ರೂ.ವರೆಗೆ ಏರಿಕೆ ಕಂಡಿದ್ದು, ಸಾರ್ವಜನಿಕರನ್ನು ನಿದ್ರೆಗೆಡಿಸಿದೆ.
ಗಗನಕ್ಕೇರಿದ ಬಿಳಿಜೋಳದ ದರಕ್ಕೆ ಜನ ತತ್ತರಿಸಿದ್ದು, ಮುಂದಿನ ದಿನಗಳಲ್ಲಿ ರೊಟ್ಟಿಗೂ ಪರದಾಡುವ ಸ್ಥಿತಿ ಬರಬಹುದು. ಸದ್ಯ ಹೋಟೆಲ್ಗಳಲ್ಲಿ ಬಿಳಿ ಜೋಳದ ರೊಟ್ಟಿ 8 ರಿಂದ 10 ರೂ.ಗೆ ಮಾರಾಟವಾಗುತ್ತಿದ್ದು, ರೊಟ್ಟಿ ಪ್ರೀಯರಿಗೂ ಬೆಲೆ ಏರಿಕೆಯ ಶಾಕ್ ತಟ್ಟಿದೆ. ವಿಜಯಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಬಿಳಿ ಜೋಳದ ಆವಕದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಜೋಳದ ದರ ಕ್ವಿಂಟಾಲ್ಗೆ 4,000 – 4,500 ರೂ.ನಿಂದ 6,000 ರೂ.ಗೆ ಏರಿಕೆ ಕಂಡಿದೆ. ಫುಟ್ಪಾತ್ನಲ್ಲಿ ಪ್ರತಿ ಕೆಜಿ 60 ರಿಂದ 65 ರೂ.ಗೆ ಮಾರಾಟವಾಗುತ್ತಿದೆ ಎನ್ನುತ್ತಿದ್ದಾರೆ ರೈತರು

