ಚಾಮರಾಜಪೇಟೆ ಕ್ಷೇತ್ರದ ಶಾಸಕರ ಕಛೇರಿಯಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಅವರು ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಿದರು. ಬಳಿಕ
ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಸ್ಥಳೀಯರಿಗೆ ಮೂಲಸೌಕರ್ಯದ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಎನು ಕ್ರಮ ಕೈಗೊಳ್ಳಬೇಕೆಂದು ನಾನು ಈಗಾಗಲೇ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಕ್ಷೇತ್ರದ ಅಭಿವೃದ್ದಿಯಾದರೆ, ಜನರು ನೆಮ್ಮದಿಯುತವಾದ ಜೀವನ ನಡೆಸುತ್ತಾರೆ. ಇದರಿಂದಾದ ಖುಷಿಯನ್ನು ನಾನು ಅನುಭವಿಸುತ್ತೇನೆ. ಜನರು ಯಾವುದೇ ಅಂಜಿಕೆಯಿಲ್ಲದೆ ಸಮಸ್ಯೆಯನ್ನು ಮುಕ್ತವಾಗಿ ನನ್ನ ಜೊತೆ ಹಂಚಿಕೊಳ್ಳಿ, ಕ್ಷೇತ್ರದ ಜನರ ಪರವಾಗಿ ನಾನು ಸದಾ ಬದ್ಧನಿರುತ್ತೇನೆ ಅದೇ ನನ್ನ ಗುರಿ ಎಂದು ತಿಳಿಸಿದರು.
